ABOUT US

                                ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾತೂರು    
 ಪಾತೂರು ಮಿತ್ತಾವು   ಎಂಬ ಕುಗ್ರಾಮವು ಕೇರಳ ರಾಜ್ಯದ ಉತ್ತರ ತುದಿಯಲ್ಲಿರುವ ಯಕ್ಷಗಾನದ ಬೀಡಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮಪಂಚಾಯತಿನ ಆರನೇ ವಾರ್ಡಿನಲ್ಲಿದೆ.ಇಲ್ಲಿರುವ  ವರ್ಕಾಡಿ ಗ್ರಾಮಪಂಚಾಯತಿನ ಏಕೈಕ ಸರಕಾರಿ ಶಾಲೆಯಾಗಿದೆ GLPS Pathur.ಈ ಶಾಲೆ ಕಾರ್ಯಚರಿಸುವ ಸ್ಥಳವು ಒಂದು ಕುಗ್ರಾಮ ಎದು ಹೇಳಿದರೆ ತಪ್ಪಾಗಲಾರದು.ಅಂಗಡಿಯಾಗಲಿ ಹೋಟಲುಗಳಾಗಲಿ,ಸರಿಯಾದ ಸಮಯಕ್ಕೆ ಬಸ್ಸುಗಳಾಗಲಿ ಈ ಶಾಲೆಯ ಹತ್ತಿರ ಇಲ್ಲ.11-08-1949 ಇಸವಿಯಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಗೆ 2ಎಕ್ರೆ 34ಸೆಂಟ್ಸ್ ಸ್ಥಳವನ್ನು ದಾನವಾಗಿ ಕೊಟ್ಟವರು ಶ್ರೀ ಕ್ಷೇತ್ರ ಕಣಂತೂರಿನ ಧರ್ಮದರ್ಶಿಗಳಾದ ಶ್ರೀಯುತ ದಿವಂಗತ ಬಾಲಕೃಷ್ಣಪೊಯ್ಯೆತ್ತಾಯರು.ಈ ಶಾಲೆಯ ಸುತ್ತಮುತ್ತಲುಜನಸಂಖ್ಯೆ ತೀರ ಕಡಿಮೆ.ಈ ಶಾಲೆಗೆ ಕೂಟತ್ತಾಜೆ,ಪೊಯ್ಯತ್ತಬೈಲ್  ಮಿತ್ತಾವುವಿನಿಂದ ವಿದ್ಯಾರ್ಜನೆಗಾಗಿ ಮಕ್ಕಳು ಕಾಲ್ನಡಿಗೆಯಲ್ಲೇ ಬರುತ್ತಾರೆ,ಇಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳು ಬಡತನ ರೇಖೆಯಿಂದ ಕೆಳಮಟ್ಟದಲ್ಲಿ ಜೀವಿಸುವವರು.ಇಲ್ಲಿಂದ 2ಕಿ.ಮೀ. ಸುತ್ತಳತೆಯಲ್ಲಿ ಕರ್ನಾಟಕ ಶಾಲೆಗಳು, 1ಕಿ.ಮೀ. ಸುತ್ತಳತೆಯಲ್ಲಿ  MGLC ಶಾಲೆ ಇದೆ,
                         ಈ ವಿದ್ಯಾಲಯದಲ್ಲಿ 1ರಿಂದ4 ರವರೆಗೆ ವಿದ್ಯಾರ್ಜನೆ ಮಾಡುವ ವ್ಯವಸ್ಥೆ ಇದೆ.ಹಳೆಯದಾದ ಕಟ್ಟಡ,ಅದರ ಮಧ್ಯೆ  2ಹೊಸ  ಕಟ್ಟಡಗಳು,ಪೆಡಗೋಜಿ PARK,ಹಳೆಯದಾದ ಗಂಜಿಶೆಡ್,ಶಾಲೆಯಮುಂದುಗಡೆ ಬಾವಿ,ಅದರ ಇಕ್ಕಡೆಗಳಲ್ಲಿ ಮೂರು ತೆಂಗಿನಮರಗಳು ಅಸ್ತವ್ಯಸ್ತ ಕ್ರೀಡಾಂಗಣ,ಭಾಗಿಕವಾಗಿರುವ ಆವರಣ  ಗೋಡೆ ಇತ್ಯಾದಿಗಳಿಂದ ಈ ಶಾಲೆಯು ಕೂಡಿದೆ.ಈ  ವಿದ್ಯಾಲಯದಲ್ಲಿ  ಖಾಯಂ ಅಧ್ಯಾಪಕರ ಸಂಖ್ಯೆ  4 ಆದರೂ ಮುಖ್ಯೋಪಾಧ್ಯರ ಕೊರತೆ ಯಾವಾಗಲೂ ಕಂಡು ಬರುತ್ತಿದೆ.ಮಾತ್ರವಲ್ಲದೆ ಇಲ್ಲಿ ಅರೆಬಿಕ್  ಅಧ್ಯಾಪಕರ ಮತ್ತು PTCM ನ ಅಭಾವವು ಹಲವು ವರ್ಷಗಳಿಂದ ಕಂಡು ಬರುತ್ತಿದೆ. ಈ ವಿದ್ಯಾಲಯವು ಸಮಾಜವದೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಮಕ್ಕಳಲ್ಲಿ ಸೃಜನಾತ್ಮಕ ನ್ಯೆಪುಣ್ಯವನ್ನು ತುಂಬಿ ಮಕ್ಕಳನ್ನು ಭಾರತದ  ಉತ್ತಮ ಪ್ರಜೆಯನ್ನಾಗಿ ಮಾಡಬೇಕೆಂಬುದೇ ನಮ್ಮೆಲ್ಲರ ಬಯಕೆಯಾಗಿದೆ.
   

       ನಮ್ಮ ಶಾಲೆಗೆ ಸ್ಥಳವನ್ನು ನೀಡಿದ
             
ಶ್ರೀಯುತ ದಿವಂಗತ ಬಾಲಕೃಷ್ಣಪೊಯ್ಯೆತ್ತಾಯರು


                    

No comments:

Post a Comment