Monday 17 November 2014

                   ಅಭಿನಂದನೆಗಳು

ಕಾಸರಗೋಡು ಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಶಟಲ್ ನೆಟ್ ತಯಾರಿಯಾಲ್ಲಿ  ಪ್ರಥಮ ಸ್ಥಾನವನ್ನು ಪಡೆದ ಮೊಹಮ್ಮದ್ ಅಲ್ತಾಫ್.ಈತ ಕುರ್ಮಾನಿನ ಅಶ್ರಫ್ ನೇಭಿಸರವರ ಪುತ್ರ.
                     

 








ಕಾಸರಗೋಡು ಜಿಲ್ಲಾಮಟ್ಟದ ವೃತ್ತಿ ಪರಿಚಯ  ಮೇಳದಲ್ಲಿ ಹುರಿಹಗ್ಗದ ಕಾಲೊರಸು ತಯಾರಿಯಾಲ್ಲಿ ಎ ಗ್ರೇಡ್  ಪಡೆದ ಮೊಹಮ್ಮದ್ ನೌಷದ್ ಮತ್ತು ವೇಸ್ಟ್ ಮೇಟಿರಿಯಲ್ ಪ್ರೋಡಕ್ಟ್ ತಯಾರಿಯಾಲ್ಲಿ ಎ ಗ್ರೇಡ್  ಪಡೆದ ಫಾತಿಮತ್ ಇರ್ಫಾನ.

Friday 14 November 2014

ಸಮವಸ್ತ್ರ ವಿತರಣೆ


ರಕ್ಷಕ ಸಂಗಮ ಮತ್ತು ಸಮವಸ್ತ್ರ ವಿತರಣೆ

ರಕ್ಷಕರ ಮಾಹಿತಿ ಶಿಬಿರವು ನಮ್ಮ ಶಾಲೆಯಲ್ಲಿ ದಿನಾಂಕ
14-11.2014 ಅಪರಾಹ್ನ 2 ಗಂಟೆಗೆ ಸರಿಯಾಗಿ ಜರಗಿತು.ರಕ್ಷಕರು ಮಾಹಿತಿ ಶಿಬಿರದಲ್ಲಿ ತುಂಬಾ ಆಸಕ್ತಿಯಿಂದ ಭಾಗವಹಿಸಿದರು. ರಕ್ಷಕರು ಚರ್ಚೆಯಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಂಡರು.
. ಮೌಲ್ಯಗಳು,ಮನೋಭಾವಗಳು,ಅಭ್ಯಾಸಗಳು
.ಕಲಿಕಾ ಬೆಂಬಲ
. ಸೌಹಾರ್ದಯುತ ಮನೆಯ ವಾತವರಣ
. ಭಾವನಾತ್ಮಕ ಬೆಂಬಲ
.ಮಗನೂ ಮಗಳೂ ಒಂದೇ
ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.ತರಗತಿಯ ಬಳಿಕ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಜರಗಿತು.ಈ ಕಾರ್ಯಕ್ರಮಕ್ಕೆ ವರ್ಕಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಪಿ ಬಿ ಅಬುಬಕ್ಕರ್,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಮನ್ ನಂದಿಕೇಶನ್,ವಾರ್ಡ್ ಸದಸ್ಯ ಸುಂದರ ಜೋಗಿಬೆಟ್ಟು, SMC Chairman PK Aboobacker,
ಹಾಗೂ MPTA President ಶ್ರೀಮತಿ ರೇವತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ನಾಯಕಿಯಾದ ಫಾತಿಮತ್ತ್ ಇರ್ಫಾನ ಸ್ವಾಗತಿಸಿ,ಉಸ್ಮಾನ್ ಮಾಸ್ಟ್ ಧನ್ಯವಾದವಿತ್ತರು.ಮಜೀದ್ ಮಾಸ್ಟ್ ಕಾರ್ಯಕ್ರಮ ನಿರೂಪಿಸಿದರು.ರಾಷ್ಟಗೀತೆಯೊಂದಿಗೆ ಸಮಾರಂಭವು ಮುಕ್ತಾಯವಾಯಿತು.

                      ಸಾಕ್ಷರ ಮಕ್ಕಳ ಭಾಲಸಭೆ






ಮಕ್ಕಳ ದಿನಾಚರಣೆಯ ಪ್ರಯುಕ್ತ ತಾ-14-11-2014ನೇ ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಸಾಕ್ಷರ ಮಕ್ಕಳ ಭಾಲಸಭೆಯನ್ನು ನಡೆಸಲಾಯಿತು.ವಿದ್ಯಾರ್ಥಿಗಳಾದ 
 ರಾಫಿ ಅಧ್ಯಕ್ಷ ಸ್ಥಾನವನ್ನು ,ತೀರ್ಥೆಶ್ ಅತಿಥಿ ಸ್ಥಾನವನ್ನು ವಹಿಸಿದರು.ಗಣೇಶ ಸ್ವಾಗತಿಸಿ,ಮನ್ವಿತ್ ಧನ್ಯವಾದವಿತ್ತು ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು.ಮಧ್ಯಾಹ್ನ ವಿಶೇಷ ಊಟ ಮತ್ತು ಪಾಯಸವನ್ನು ನೀಡಲಾಯಿತು.

Tuesday 11 November 2014

ಮಕ್ಕಳ ದಿನಾಚರಣೆಯ ವಿಶೇಷತೆ
ದಿನಾಂಕ 14-11-2014ನೇ ಶುಕ್ರವಾರ ಬೆಳಿಗ್ಗೆ ಸಾಕ್ಷರ ಮಕ್ಕಳಿಂದ ಭಾಲಸಭೆಯು ಅಪರಾಹ್ನ 2 ಗಂಟೆಗೆ ರಕ್ಷಕ ಸಂಗಮ ಕಾರ್ಯಕ್ರಮವು ಆ ಬಳಿಕ ಸಮವಸ್ತ್ರ ವಿತರಣ ಕಾರ್ಯಕ್ರಮವು ಜರಗಲಿರುವುದು.ತಮಗೆಲ್ಲರಿಗೂ ಆದರದ ಸ್ವಾಗತ.