Thursday, 4 December 2014

ಅಗಲಿದ V R Krishna iyarಗೆ ಭಾವಪೂರ್ಣ ಶ್ರದ್ಧಾಂಜಲಿ


                               RUNNERS TROPHY

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ L.P ವಿಭಾಗದ ಕನ್ನಡ Itemಗಳಲ್ಲಿ ಗಳಿಸಿದ Runners Trophyಯನ್ನು ಸ್ವೀಕರಿಸುತ್ತಿರುವ ಶಾಲಾ ಅಧ್ಯಾಪಕರು.

                                               ಅಭಿನಂದನೆಗಳು
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ  L.P ವಿಭಾಗದ ಕನ್ನಡ Itemಗಳಲ್ಲಿ RUNNERS TROPHYಗೆ ಕಾರಣರಾದ ಪುಟಾಣಿ ಮಕ್ಕಳು.

Wednesday, 3 December 2014


          ಕಲೋತ್ಸವದಲ್ಲಿ A GRADE ಪಡೆದ ಮಕ್ಕಳು


ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ LP ಮಟ್ಟದ ಕನ್ನ಼ಡ ಕಥೆ ಹೇಳುವುದರಲ್ಲಿ  A Grade ಪಡೆದ Assiyamathul vafiya binth








ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ LP ಮಟ್ಟದ  Mappilapatನಲ್ಲಿ  A Grade ಪಡೆದ Kadeejath Kubra


ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ LP ಮಟ್ಟದ ಕನ್ನ಼ಡ ಭಾಷಣದಲ್ಲಿ  A Grade ಪಡೆದ Fathimath Irfana

Monday, 17 November 2014

                   ಅಭಿನಂದನೆಗಳು

ಕಾಸರಗೋಡು ಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಶಟಲ್ ನೆಟ್ ತಯಾರಿಯಾಲ್ಲಿ  ಪ್ರಥಮ ಸ್ಥಾನವನ್ನು ಪಡೆದ ಮೊಹಮ್ಮದ್ ಅಲ್ತಾಫ್.ಈತ ಕುರ್ಮಾನಿನ ಅಶ್ರಫ್ ನೇಭಿಸರವರ ಪುತ್ರ.
                     

 








ಕಾಸರಗೋಡು ಜಿಲ್ಲಾಮಟ್ಟದ ವೃತ್ತಿ ಪರಿಚಯ  ಮೇಳದಲ್ಲಿ ಹುರಿಹಗ್ಗದ ಕಾಲೊರಸು ತಯಾರಿಯಾಲ್ಲಿ ಎ ಗ್ರೇಡ್  ಪಡೆದ ಮೊಹಮ್ಮದ್ ನೌಷದ್ ಮತ್ತು ವೇಸ್ಟ್ ಮೇಟಿರಿಯಲ್ ಪ್ರೋಡಕ್ಟ್ ತಯಾರಿಯಾಲ್ಲಿ ಎ ಗ್ರೇಡ್  ಪಡೆದ ಫಾತಿಮತ್ ಇರ್ಫಾನ.

Friday, 14 November 2014

ಸಮವಸ್ತ್ರ ವಿತರಣೆ


ರಕ್ಷಕ ಸಂಗಮ ಮತ್ತು ಸಮವಸ್ತ್ರ ವಿತರಣೆ

ರಕ್ಷಕರ ಮಾಹಿತಿ ಶಿಬಿರವು ನಮ್ಮ ಶಾಲೆಯಲ್ಲಿ ದಿನಾಂಕ
14-11.2014 ಅಪರಾಹ್ನ 2 ಗಂಟೆಗೆ ಸರಿಯಾಗಿ ಜರಗಿತು.ರಕ್ಷಕರು ಮಾಹಿತಿ ಶಿಬಿರದಲ್ಲಿ ತುಂಬಾ ಆಸಕ್ತಿಯಿಂದ ಭಾಗವಹಿಸಿದರು. ರಕ್ಷಕರು ಚರ್ಚೆಯಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಂಡರು.
. ಮೌಲ್ಯಗಳು,ಮನೋಭಾವಗಳು,ಅಭ್ಯಾಸಗಳು
.ಕಲಿಕಾ ಬೆಂಬಲ
. ಸೌಹಾರ್ದಯುತ ಮನೆಯ ವಾತವರಣ
. ಭಾವನಾತ್ಮಕ ಬೆಂಬಲ
.ಮಗನೂ ಮಗಳೂ ಒಂದೇ
ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.ತರಗತಿಯ ಬಳಿಕ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಜರಗಿತು.ಈ ಕಾರ್ಯಕ್ರಮಕ್ಕೆ ವರ್ಕಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಪಿ ಬಿ ಅಬುಬಕ್ಕರ್,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಮನ್ ನಂದಿಕೇಶನ್,ವಾರ್ಡ್ ಸದಸ್ಯ ಸುಂದರ ಜೋಗಿಬೆಟ್ಟು, SMC Chairman PK Aboobacker,
ಹಾಗೂ MPTA President ಶ್ರೀಮತಿ ರೇವತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ನಾಯಕಿಯಾದ ಫಾತಿಮತ್ತ್ ಇರ್ಫಾನ ಸ್ವಾಗತಿಸಿ,ಉಸ್ಮಾನ್ ಮಾಸ್ಟ್ ಧನ್ಯವಾದವಿತ್ತರು.ಮಜೀದ್ ಮಾಸ್ಟ್ ಕಾರ್ಯಕ್ರಮ ನಿರೂಪಿಸಿದರು.ರಾಷ್ಟಗೀತೆಯೊಂದಿಗೆ ಸಮಾರಂಭವು ಮುಕ್ತಾಯವಾಯಿತು.

                      ಸಾಕ್ಷರ ಮಕ್ಕಳ ಭಾಲಸಭೆ






ಮಕ್ಕಳ ದಿನಾಚರಣೆಯ ಪ್ರಯುಕ್ತ ತಾ-14-11-2014ನೇ ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಸಾಕ್ಷರ ಮಕ್ಕಳ ಭಾಲಸಭೆಯನ್ನು ನಡೆಸಲಾಯಿತು.ವಿದ್ಯಾರ್ಥಿಗಳಾದ 
 ರಾಫಿ ಅಧ್ಯಕ್ಷ ಸ್ಥಾನವನ್ನು ,ತೀರ್ಥೆಶ್ ಅತಿಥಿ ಸ್ಥಾನವನ್ನು ವಹಿಸಿದರು.ಗಣೇಶ ಸ್ವಾಗತಿಸಿ,ಮನ್ವಿತ್ ಧನ್ಯವಾದವಿತ್ತು ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು.ಮಧ್ಯಾಹ್ನ ವಿಶೇಷ ಊಟ ಮತ್ತು ಪಾಯಸವನ್ನು ನೀಡಲಾಯಿತು.

Tuesday, 11 November 2014

ಮಕ್ಕಳ ದಿನಾಚರಣೆಯ ವಿಶೇಷತೆ
ದಿನಾಂಕ 14-11-2014ನೇ ಶುಕ್ರವಾರ ಬೆಳಿಗ್ಗೆ ಸಾಕ್ಷರ ಮಕ್ಕಳಿಂದ ಭಾಲಸಭೆಯು ಅಪರಾಹ್ನ 2 ಗಂಟೆಗೆ ರಕ್ಷಕ ಸಂಗಮ ಕಾರ್ಯಕ್ರಮವು ಆ ಬಳಿಕ ಸಮವಸ್ತ್ರ ವಿತರಣ ಕಾರ್ಯಕ್ರಮವು ಜರಗಲಿರುವುದು.ತಮಗೆಲ್ಲರಿಗೂ ಆದರದ ಸ್ವಾಗತ.

Monday, 20 October 2014

Friday, 17 October 2014

                                      

                 ಅಭಿನಂದನೆಗಳು







 ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ   ಕಾರ್ಡ್ ಮತ್ತು ಸ್ಚ್ರೋ ಬೋರ್ಡ್ ಪ್ರೋಡಕ್ಟ್  ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ರಾಫಿ
 ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದನೆಟ್ ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಮೊಹಮ್ಮದ್ ಅಲ್ತಾಫ್


  ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ coir door mat ತಯಾರಿಸುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಮೊಹಮ್ಮದ್ ನೌಷದ್  




  ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ Paper Craftನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕದೀಜತ್ ಕುಬ್ರ 




ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ Use and Waste material productನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಫಾತಿಮತ್ತ್ ಇರ್ಫಾನ.


                   ಹಾರ್ದಿಕ ಅಭಿನಂದನೆಗಳು




 ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದಲ್ಲಿ ಭಾಗವಹಿಸಿದ ಮಕ್ಕಳು

Tuesday, 7 October 2014

ದಿವಂಗತ ಶಿವಾನಂದ ಅರಿಬೈಲ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ನಮ್ಮೆಲ್ಲರ ಅಚ್ಚುಮೆಚ್ಚಿನ ಅಧ್ಯಾಪಕರಾಗಿ ಬದುಕಿನ ದಾರಿದೀಪವಾಗಿ,ಉತ್ತಮ ಮಾರ್ಗದರ್ಶಕರಾಗಿ,ಸರಳತೆ,ಸೌಜನ್ಯತೆಯಿಂದ ಆದರ್ಶಪ್ರಾಯರಾಗಿ ಬದುಕಿ,ಇದೀಗ ನಮ್ಮನ್ನಗಲಿದ ನಿಮ್ಮ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸುವ.
         ಬೀಜ ವಿತರಣೆ

   ವರ್ಕಾಡಿ ಕೃಷಿ ವಿಜ್ಞಾನಕೇಂದ್ರದ ಸಹಾಯಕ ಕೃಷಿಆಫೀಸರ್ ರಾಧಕೃಷ್ಣನ್ ಮತ್ತು ಸಿಬಂದಿ ಗಂಗಾಧರ್ ರವರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ  ತರಕಾರಿ ಬೀಜಗಳನ್ನು ವಿತರಿಸಿದರು.

Thursday, 2 October 2014

ಗಾಂಧಿಜಯಂತಿ ದಿನಾಚರಣೆ




ಗಾಂಧಿಜಯಂತಿ ದಿನಾಚರಣೆಯನ್ನು ಎಲ್ಲಾ ಅಧ್ಯಾಪಕ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಆಚರಿಸಲಾಯಿತು.ಶಾಲಾಎಸಂಭ್ಳಿಯನ್ನು ನಡೆಸಿ ಶಾಲಾಪರಿಸರವನ್ನು ಶುಚಿಗೊಳಿಸಲಾಯಿತು.ಮಧ್ಯಾಹ್ನದೂಟವನ್ನು ನೀಡಿ ಸಂಜೆ  3ಗಂಟೆಗೆ ಮಕ್ಕಳನ್ನು ಮನೆಗೆ ಬಿಡಲಾಯಿತು.

Monday, 22 September 2014

                       ನಮ್ಮ ವಿದ್ಯಾಮಂದಿರ 
                                                ಮಧ್ಯಾಹ್ನದ ಭೋಜನ

Sunday, 7 September 2014

ಸಡಗರದ ಓಣಂ ಹಬ್ಬ

 ಮಕ್ಕಳು ಪೂಕ್ಕಳಂ ಹಾಕುವುದರ ಮೂಲಕ ಓಣಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಅದ್ದೂರಿಯ ಓಣಂಸದ್ಯವನ್ನು ಏರ್ಪಡಿಸಲಾಯಿತು.ನಿವೃತ ಮುಖ್ಯೋಪಾಧ್ಯಯರಾದ ನರಸಿಂಹ ಮಾಸ್ಟ್,ವಿಠಲ ಮಾಸ್ಟ್,ವರ್ಕಾಡಿ ಪಂಚಾಯತಿನ
ವಾರ್ಡ್ ಸದಸ್ಯೆಯಾದ ಶೀಲಾವತಿ,ಪಿ.ಟಿ.ಎ ಅಧ್ಯಕ್ಷರಾದ ಪಿ.ಕೆ.ಅಬೂಬಕ್ಕರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಝವುರ ಟೀಚರ್
ಸ್ವಾಗತಿಸಿ ಉಸ್ಮಾನ್ ಮಾಸ್ಟ್ರವರು ಧನ್ಯವಾದವಿತ್ತರು.ಮಜೀದ್ ಮಾಸ್ಟ್ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Saturday, 6 September 2014

ಸಂಭ್ರಮದ ಶಿಕ್ಷಕ ದಿನಾಚರಣೆ



 ನಿವೃತ ಮುಖ್ಯೋಪಾಧ್ಯಯರನ್ನು  ಸನ್ಮಾನಿಸುವ ಮೂಲಕ ಶಿಕ್ಷಕ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.ನಿವೃತ ಮುಖ್ಯೋಪಾಧ್ಯಯರಾದ ನರಸಿಂಹ ಮಾಸ್ಟ್,ವಿಠಲ ಮಾಸ್ಟ್,ವರ್ಕಾಡಿ ಪಂಚಾಯತಿನ
ವಾರ್ಡ್  ಸದಸ್ಯೆಯಾದ ಶೀಲಾವತಿ,ಪಿ.ಟಿ.ಎ ಅಧ್ಯಕ್ಷರಾದ ಪಿ.ಕೆ.ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.ಝವುರ ಟೀಚರ್  ಕಾರ್ಯಕ್ರಮವನ್ನು ಸ್ವಾಗತಿಸಿ ಉಸ್ಮಾನ್ ಮಾಸ್ಟ್ರವರು ಧನ್ಯವಾದವಿತ್ತರು.ಮಜೀದ್  ಮಾಸ್ಟ್ರವರು  ಕಾರ್ಯಕ್ರಮವನ್ನು  ನಿರೂಪಿಸಿದರು. 

Onam Celebration

PTA Prisident And Children

Monday, 25 August 2014

ಮಹಾಸಭೆ

                                                                                                       
ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ತಾ-8-08-2014ನೇ  ಶುಕ್ರವಾರ ಮಧ್ಯಾಹ್ನ 2.30ಕ್ಕೆ ಸರಿಯಾಗಿ  ಜರಗಿತು.11 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆಮಾಡಲಾಯಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಪಿ.ಕೆ ಅಬೂಬಕ್ಕರ್, ಉಪಾಧ್ಯಾಕ್ಷರಾಗಿ ಸುಂದರಿ,ಎ೦.ಪಿ.ಟಿ.ಎ ಅಧ್ಯಕ್ಷರಾಗಿ ರೇವತಿ,ಉಪಾಧ್ಯಾಕ್ಷರಾಗಿ  ಭಾರತಿಯವರು ಆಯ್ಕೆಯಾದರು.

Thursday, 21 August 2014

ಗಣ್ಯರ ವೀಕ್ಷಣೆ

ಸಾಕ್ಷರ ಯೋಜನೆಯ 11ನೇ ದಿನದ ಮೌಲ್ಯಮಾಪನವನ್ನು  ತಾ-21-08-2014ನೇ ಗುರುವಾರ   ವರ್ಕಾಡಿ ಪಂಚಾಯತ್ತ್ ಅಧ್ಯಕ್ಷರಾದ ಸುನಿತವಸಂತ್ ಮತ್ತು ಉಪಾಧ್ಯಕ್ಷರಾದ ಪಿ ವಿ ಅಬೂಬಕ್ಕರ್ ರವರು ವೀಕ್ಷಿಸಿದರು.

Friday, 15 August 2014

ಸಂಭ್ರಮದ 68ನೇ ಸ್ವಾತಂತ್ರ್ಯೋತ್ಸವ ಆಚರಣೆ

   
ಮಂಜೇಶ್ವರ:ಇಲ್ಲಿನ ವೋರ್ಕಾಡಿ ಪಂಚಾಯತಿನ ಪಾತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  68 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಪಿ ಟಿ ಎ ಅಧ್ಯಕ್ಸರಾದ ಪಿ ಕೆ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ  ವೋರ್ಕಾಡಿ ಗ್ರಾಮ ಪಂ ಸದಸ್ಯೆ ಶೀಲಾವತಿ ಯವರು ದ್ವಜಾರೋಹಣಗೈದರು. ವೇದಿಕೆಯಲ್ಲಿ  ಮಲ್ಲಿಕಾ,ಅಧ್ಯಾಪಕರಾದ ಅಬುಲ್ ಮಜೀದ್, ಉಸ್ಮಾನ್,ಜವುರ ಟೀಚರ್ ಹಾಗೂ ಸುಂದರಿ,ರೇವತಿ ಭಾರತಿ,ಅಬ್ದುಲ್ ಅಜೀಜ್, ಸದಾಶಿವ ಗಟ್ಟಿ, ಮಾಧವ, ಮುಂತಾದ ಗಣ್ಯ ವೈಕ್ತಿಗಳು ಉಪಸ್ಥಿತರಿದ್ದರು. 
 ಸಾಂಸ್ಕ್ರ್ತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು